logo
Last updated: 2009-11-09 14:40:45
E-Paper
Archives
November 2009
M T W T F S S
« Oct   Dec »
 1
2345678
9101112131415
16171819202122
23242526272829
30  

ಕೋಡಾ - ಬಾಲಿವುಡ್‌ ನಂಟು ಬಹಿರಂಗ : ನಟಿಯರಿಗೆ ೫೦ ಲಕ್ಷ !

ರಾಂಚಿ ೮- ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಮಧುಕೋಡಾ ಅವರ ಮೇಲಿನ ಆರೋಪಗಳು ದಿನದಿಂದ ದಿನಕ್ಕೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಿವೆ. ಕೋಡಾ ಅವರ ಬಹುಕೋಟಿ ಮೊತ್ತದ ಹವಾಲಾ ಹಗರಣದಲ್ಲಿನ ಇತ್ತೀಚಿನ ವರದಿಗಳು ಕೋಡಾ ಅವರ ಬಾಲಿವುಡ್‌ ಸಂಪರ್ಕವನ್ನು ಬಹಿರಂಗಪಡಿಸಿದೆ. ಜಾ ಖ ರಂಡ್‌ ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಕೋಡಾ ಅವರಿಂದ ಇಬ್ಬರು ಬಾಲಿವುಡ್‌ ನಟಿಯರು ಹಣ ಪಡೆದಿದ್ದರು ಎಂಬುದನ್ನು ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯದ ಅಧಿ ಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ನಟಿಯರು ಕೋಡಾ ಅವರಿಂದ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕ್ರಮವಾಗಿ ೪೦ ಲಕ್ಷ ರೂ. ಮತ್ತು ೧೦ ಲಕ್ಷ ರೂ. ಗಳನ್ನು ಪಡೆದಿದ್ದರು ಎಂದು ಆರೋಪಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ. ಆಸಕ್ತಿದಾಯಕವೆಂದರೆ ಈ ನಟಿಯರಲ್ಲಿ ಒಬ್ಬರನ್ನು ೨೦೦೮ ರಲ್ಲಿ ಕೋಡಾ ಅವರು ವ ು ು ಖ ್ಯ ವ ು ಂ ತಿ ್ರ ¿ ೂ ಗಿ ದ ಾ ್ದ ಗ ಜಾರ್ಖಂಡ್‌ ಬ್ರಾಂಡ್‌ ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಅನಿವಾಸಿ ಭಾರತೀಯರಿಂದ ಬುಡಕಟ್ಟು ರಾಜ್ಯದ ಅಭಿವೃದಿಟಛಿಗೆ ಹೂಡಿಕೆ ಆಕರ್ಷಿಸುವ ಸಲುವಾಗಿ ಈ ನಟಿಯನ್ನು ನೇಮಕ ಮಾಡಲಾಗಿತ್ತು . ಹೀಗಿದ್ದರೂ ಈ ವರದಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಈ ಬಾಲಿವುಡ್‌ ನಟಿಯರು ಇಷ್ಟು ಭಾರೀ ಮೊತ್ತದ ಹಣ ಸ್ವೀಕರಿಸಿದ್ದೇಕೆ ? ಅವರಿಗೆ ನೀಡಲಾದ ಹಣ ಹವಾಲಾ ದಂಧೆಯ ಕಪ್ಪು ಹಣ ಎಂಬ ಅರಿವು ಅವರಿಗಿತ್ತೆ ? ಬಾಲಿವುಡ್‌ನಲ್ಲಿ ಕೋಡಾ ಅವರ ಇತರ ಫಲಾನುಭವಿಗಳೂ ಇದ್ದಾರೆಯೆ ? ಈ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಇಬ್ಬರೂ ನಟಿಯರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


Monday, November 9th, 2009 at 2:40 pm

SocialTwist Tell-a-Friend

Be the first to write to Editor

Write to the Editor