logo
Last updated: 2009-11-19 15:33:26
E-Paper
Archives
November 2009
M T W T F S S
« Oct   Dec »
 1
2345678
9101112131415
16171819202122
23242526272829
30  

ಶಿಶಿರೋತ್ಸವ ನಾಟಕಗಳ ಹಬ್ಬಕ್ಕೆ ಸಂಭ್ರಮದ ಚಾಲನೆ

ಬೆಳಗಾವಿ ೧೮- ಕಳೆದ ೩೦ ವರ್ಷಗಳಿಂದ ಕನ್ನಡ ಕಲೆ ಹಾಗೂ ಸಂಸ್ಕೃತಿಗಳನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿರುವ ರಂಗ ಸಂಪದ ತಂಡದ ಕಾರ್ಯ ಶ್ಲಾಘನೀಯ ಎಂದು ಖ್ಯಾತ ನ್ಯಾಯವಾದಿ ಹಾಗೂ ಕರ್ನಾಟಕ ಕಾನೂನು ಸಂಸ್ಥೆಯ ಕಾರ್ಯಾಧ್ಯಕ್ಷ ರಾದ ಎ.ಜಿ. ಕುಲಕರ್ಣಿ ನುಡಿದರು. ನಗರದ ಕೆ.ಬಿ. ಆರ್‌. ರಂಗಮಂದಿರದಲ್ಲಿ ರಂಗ ಸಂಪದ ಆಯೋಜಿಸಿರುವ ‘ ಶಿಶಿರೋತ್ಸವ - ನಾಟಕಗಳ ಹಬ್ಬ’ ವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕನ್ನಡ ಸಂಸ್ಕೃತಿಯನ್ನು ಉಳಿಸಿ- ಬೆಳೆಸುವದು ಪ್ರತಿಯೊಬ್ಬನ ಜವಾಬ್ದಾರಿಯಾಗಿದ್ದು ರಂಗ ಸಂಪದ ಈ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿದೆ. ನಿ ರ ಂ ತ ರ ವ ಾ ಗಿ ನಾಟಕೋತ್ಸವಗಳನ್ನು ಏರ್ಪಡಿಸುವ ಮೂಲಕ ಕಲಾವಿದರಿಗೆ ತಮ್ಮ ಕಲೆಯ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸುವ ಕೆಲಸ ಮಾಡಿದೆ ಎಂದರು. ಪಾಲಕರು ತಮ್ಮ ಮಕ್ಕಳಲ್ಲಿ ಹುದುಗಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸಮಾಡಬೇಕು ಹೊರತಾಗಿ ತಮ್ಮ ಆಸೆ - ಆಕಾಂಕ್ಷೆ ಅಥವಾ ನಿರ್ಣಯಗಳನ್ನು ಮಕ್ಕಳ ಮೇಲೆ ಒತ್ತಾಯಪೂರ್ವಕವಾಗಿ ಹೇರಬಾರದು ಎಂದು ಸಲಹೆ ನೀಡಿದರು. ವೇದಿಕೆಯಮೇಲೆ ರಂಗ ಸಂಪದ ಅಧ್ಯಕ್ಷರಾದ ಡಿ.ಎಸ್‌. ಚೌಗುಲೆ, ಮಹಾಪೋಷಕರಾದ ಲಕ್ಷ್ಮಿ ಜೋಗ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೀನಾಸಂ ನಾಟಕ ತಂಡದ ವ್ಯವಸ್ಥಾಪಕರಾದ ಯಾಜಿ ಅವರನ್ನು ಸನ್ಮಾನಿಸಲಾಯಿತು.


Thursday, November 19th, 2009 at 3:33 pm

SocialTwist Tell-a-Friend

Be the first to write to Editor

Write to the Editor